b1 (1)
b2 (1)

ಸಾಲ ಸಮಾಲೋಚನೆ.

1.ಪ್ರತಿಬಂಧಕ ಆರ್ಥಿಕ ಸಾಲ ಸಲಹೆಗಳನ್ನು ನೀಡುವುದು.
ಬ್ಯಾಂಕುಗಳಲ್ಲಿ ಲಭ್ಯವಿರುವ ವಿವಿಧ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು.
ಮರು ಪಾವತಿಯ ಸಾಮರ್ಥ್ಯವನ್ನಾಧರಿಸಿ ಸಾಲ ಪಡೆಯುವಿಕೆ ಬಗ್ಗೆ ತಿಳುವಳಿಕೆ ನೀಡುವುದು.

ಬ್ಯಾಂಕಿಂಗ್ ವ್ಯವಹಾರ ಪದ್ಧತಿ ಮತ್ತು ನಿಯಮ ನಿರೂಪಣಾ ವ್ಯವಸ್ಥೆ.

ಭಾರತೀಯ ಬ್ಯಾಂಕಿಂಗ್ ಸಂಹಿತೆ ಮತ್ತು ಮಾನದಂಡ ಮಂಡಳಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್, ಇತರ ಬ್ಯಾಂಕುಗಳ ಸಹಭಾಗಿತ್ವದಲ್ಲಿ ಎಪ್ರಿಲ್ 2005ರಂದು ಸ್ಥಾಪಿಸಿತು. ಬ್ಯಾಂಕಿಂಗ್ ವ್ಯವಸ್ಥೆಯ ಕಾವಲುಗಾರನಂತೆ ಕಾರ್ಯ ನಿರ್ವಹಿಸುವ ಮಂಡಳಿಯು, ಸದಸ್ಯ ಬ್ಯಾಂಕುಗಳಿಂದ (ಗ್ರಾಮೀಣ ಬ್ಯಾಂಕುಗಳು ಮತ್ತು ಪಟ್ಟಣ ಸಹಕಾರಿ ಬ್ಯಾಂಕುಗಳೂ ಸೇರಿದಂತೆ) ನಿಗದಿತ ಕನಿಷ್ಠ ಪ್ರಮಾಣದ ಸೇವಾ ಸೌಲಭ್ಯಗಳು ಗ್ರಾಹಕನಿಗೆ ಸಿಗುವಂತೆ ನಿಗಾ ವಹಿಸುತ್ತದೆ.

ಭಾರತದಲ್ಲಿ ಬ್ಯಾಂಕಿಂಗ್ ಪದ್ಧತಿಗಳ ನಾಗರಿಕ ಸನದು.

ಸಮಾಜದ ಸಾಮಾಜಿಕ ಆರ್ಥಿಕ ಧ್ಯೇಯವನ್ನು ಸಾಧಿಸಿ, ಹೆಚ್ಚು ಹೆಚ್ಚು ಗ್ರಾಹಕರನ್ನು ತನ್ನ ತೆಕ್ಕೆಯೊಳಗೆ ಸೆಳೆದುಕೊಳ್ಳುವ ಬ್ಯಾಂಕಿಂಗ್ ಉದ್ಯಮದ ಸಫಲತೆಯು ಮುಖ್ಯವಾಗಿ ಗ್ರಾಹಕರ ತೃಪ್ತಿಯನ್ನು ಅವಲಂಬಿಸಿದೆ.
ಈ ಸನದು ಗ್ರಾಹಕರ ಕುರಿತ ಬ್ಯಾಂಕುಗಳ ಬದ್ಧತೆ ಹಾಗೂ ಹೊಣೆಗಾರಿಕೆಗಳೊಂದಿಗೆ ದೂರುಗಳ ಪರಿಹಾರೋಪಾಯಗಳನ್ನೂ ವಿವರಿಸುತ್ತದೆ. ಮಾತ್ರವಲ್ಲದೇ, ಗ್ರಾಹಕ – ಬ್ಯಾಂಕರ್ ಸಂಬಂಧದಲ್ಲಿ ಗ್ರಾಹಕರ ಬದ್ಧತೆಯ ಬಗ್ಗೆಯೂ ಉಲ್ಲೇಖಿಸುತ್ತದೆ.
gallery-link-image

ಟ್ರಸ್ಟಿನ ಕುರಿತು

index-about

ಟ್ರಸ್ಟು ತನ್ನ ಪ್ರಥಮ ಸಭೆಯನ್ನು ತಾರೀಕು 02-10-2010 ರಂದು ನಡೆಸಿತು.ಟ್ರಸ್ಟ್‍ನ ಮುಖ್ಯ/ಕೇಂದ್ರೀಯ ಕಾರ್ಯಾಲಯವನ್ನು, ಸಿಂಡಿಕೇಟ್ ಬ್ಯಾಂಕಿನ ಸ್ಥಾಪಕರ ದಿನವಾದ 20ನೆಯ ಅಕ್ಟೋಬರದಂದು ಮಣಿಪಾಲದಲ್ಲಿ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವರಾದ ಡಾ. ವಿ. ಎಸ್ ಆಚಾರ್ಯರು ಉದ್ಘಾಟಿಸಿದರು. ಹಾಗೆಯೇ ಟ್ರಸ್ಟು ತನ್ನ 2 ಆರ್ಥಿಕ ಸಾಕ್ಷರತಾ ಮತ್ತು ಸಾಲ ಸಮಾಲೋಚನಾ ಕೇಂದ್ರಗಳನ್ನು (ಎಫ್.ಎಲ್.ಸಿ.ಸಿ. ಸೆಂಟರ್ಸ್)- ಉಡುಪಿ, ಮಂಗಳೂರಿನಲ್ಲಿ ತಾ.20ನೆಯ ಅಕ್ಟೋಬರದಂದು ಹಾಗೂ ಮೂರನೆಯ ಕೇಂದ್ರವನ್ನು ಅಕ್ಟೋಬರ 21ರಂದು ಕುಮಟಾದಲ್ಲಿ ತೆರೆಯಿತು.

Read More

ಗ್ರಾಹಕರು ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು.

ಆರ್ಥಿಕ ಸಾಕ್ಷರತೆ ಎಂದರೇನು?

ವೈಯಕ್ತಿಕ ಆರ್ಥಿಕ ವ್ಯವಹಾರ ನಿರ್ವಹಿಸಲು ಬೇಕಾಗುವ ತಿಳುವಳಿಕೆ ಅಥವಾ ಜ್ಞಾನವನ್ನು ಹೊಂದುವುದು. ಸಾಮಾನ್ಯ ಪ್ರಜೆಯಲ್ಲಿ, ಬ್ಯಾಂಕಿನಿಂದ ತಾನು ಏನನ್ನು ಅಪೇಕ್ಷಿಸಬಹುದು ಮತ್ತು ಯಾವುದನ್ನು ಪಡೆಯಬಹುದು ಎಂಬ ಅರಿವನ್ನು ಮೂಡಿಸುವ ಮೂಲಕ ಅವರ ಬೇಡಿಕೆಗಳನ್ನು ಜಾಗೃತಗೊಳಿಸುವುದು/ಉದ್ದೀಪನಗೊಳಿಸುವುದೇ ಆರ್ಥಿಕ ಸಾಕ್ಷರತೆಯ ಮಹಾ ಮಂತ್ರ. ಆರ್ಥಿಕ ಸಾಕ್ಷರತೆಯು ಆರ್ಥಿಕ ಸೇರ್ಪಡೆಯ ಅವಿಭಾಜ್ಯ ಅಂಗವಾಗಿದೆ.

ಬ್ಯಾಂಕ್ ಎಂದರೇನು?

ಹಣಕಾಸು ವ್ಯವಹಾರ ನಿರ್ವಹಿಸುವ ಅಧಿಕೃತ ಆರ್ಥಿಕ ಸಂಸ್ಥೆಯೇ ಬ್ಯಾಂಕ್. ಜನರಿಂದ ಠೇವಣಿಯನ್ನು ಪಡೆದು ಅದನ್ನು ಅಗತ್ಯ ಉಳ್ಳವರಿಗೆ ಸಾಲ ರೂಪದಲ್ಲಿ ನೀಡಿ ಅಥವಾ ಬೇರೆ ಸುರಕ್ಷಿತ ಉದ್ಯಮಗಳಲ್ಲಿ ಹೂಡಿ ಲಾಭ ಗಳಿಸುವ ಉದ್ಯಮವೇ ಬ್ಯಾಂಕಿಂಗ್.

ಬ್ಯಾಂಕ್ ಖಾತೆಯನ್ನು ಯಾರೆಲ್ಲಾ ತೆರೆಯಬಹುದು?

 • ಪ್ರಾಯ ಪ್ರಬುದ್ಧರಾದ ಪುರುಷರು, ಮಹಿಳೆಯರು ಮತ್ತು ಯುವಕರು ಸ್ವತಂತ್ರವಾಗಿ ಬ್ಯಾಂಕ್ ಖಾತೆಯನ್ನು ತೆರೆಯಬಹುದು.
 • ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಜಂಟಿಯಾಗಿ ಬ್ಯಾಂಕ್ ಖಾತೆಯನ್ನು ತೆರೆಯಬಹುದು.

ಬ್ಯಾಂಕ್ ಖಾತೆ ತೆರೆಯಲು ಬೇಕಾದ ಅವಶ್ಯಕ ದಾಖಲೆಗಳಾವುವು?

ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ (ಕೆ.ವೈ.ಸಿ.)ಯ ಅಂಗವಾಗಿ, ಕೆಳಗೆ ಕಾಣಿಸಿದ ಯಾವುದಾದರೂ ಒಂದು ಅಥವಾ ಎರಡರ ಪ್ರತಿಯನ್ನು ನಿಮ್ಮ ಭಾವಚಿತ್ರದ ಮೂರು ಪ್ರತಿಗಳ ಜೊತೆಗೆ ನೀಡಬೇಕಾಗುತ್ತದೆ.

 • ಭಾವಚಿತ್ರವಿರುವ ಗುರುತು ಪತ್ರ.
 • ಪಡಿತರ ಚೀಟಿ.
 • ವಾಹನ ಚಾಲನಾ ಪರವಾನಿಗೆ ಪತ್ರ.
 • ಟೆಲಿಫೋನ್ ಬಿಲ್.
 • ವಿದ್ಯುತ್ ಬಿಲ್.
 • ಪಾಸ್ ಪೋರ್ಟ್ ನ ಪ್ರತಿ
 • ‘ಆಧಾರ್’ ಗುರುತಿನ ಚೀಟಿ
 • ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದೊರೆತ ಉದ್ಯೋಗ ಕಾರ್ಡ್

ಎಷ್ಟು ಪ್ರಕಾರದ ಬ್ಯಾಂಕ್ ಖಾತೆಗಳ ಲಭ್ಯತೆ ಇದೆ?

ಕೆಳಗೆ ಹೆಸರಿಸಿರುವ ಖಾತೆಗಳ ಲಭ್ಯತೆ ಇದೆ.

 • ಉಳಿತಾಯ ಖಾತೆ.
 • ಸುಲಭ ಖಾತೆ. (ನೋ ಫ್ರಿಲ್ಸ್ ಅಕೌಂಟ್)
 • ಚಾಲ್ತಿ ಖಾತೆ. (ಕರೆಂಟ್ ಅಕೌಂಟ್)